ಕನ್ನಡ

ತಂತ್ರಜ್ಞಾನ

Xteink X4 ನಲ್ಲಿ ಕನ್ನಡ: CrossPoint Reader

Xteink X4 ಅಂಗೈಯಗಲದ ಒಂದು ಇ-ಇಂಕ್ ಓದುಗ. CrossPoint Reader ಅದಕ್ಕಾಗಿ ಬರೆದ ಮುಕ್ತ ಸಂಕೇತದ ತಂತ್ರಾಂಶ. ಆದರೆ ಅದರಲ್ಲಿ ಒಂದು ಅಕ್ಷರಕ್ಕೆ ಒಂದೇ ಚಿತ್ರ — ಹಾಗಾಗಿ ಕನ್ನಡದ ಒತ್ತಕ್ಷರಗಳು, ಅರ್ಕಾವೊತ್ತು ಸರಿಯಾಗಿ ಜೋಡಣೆಯಾಗುತ್ತಿರಲಿಲ್ಲ.

ಈ ಕನ್ನಡ ಆವೃತ್ತಿ ಕನ್ನಡ ಗ್ಲಿಫ್ ರೆಂಡರ್ ಎಂಜಿನ್ ಅನ್ನು CrossPoint ಒಳಗೆ ಸೇರಿಸುತ್ತದೆ. ಪುಸ್ತಕದಲ್ಲಿ ಕನ್ನಡ ಪಠ್ಯ ಬಂದಾಗ ಅದನ್ನು ಈ ಎಂಜಿನ್ ಜೋಡಿಸಿ ಬರೆಯುತ್ತದೆ.

ಕನ್ನಡ ಪುಸ್ತಕದ ಪುಟ ತೋರಿಸುತ್ತಿರುವ Xteink X4 ಇ-ಇಂಕ್ ಓದುಗ
ಒತ್ತಕ್ಷರಗಳು (ತೃಪ್ತಿ, ಮಧ್ಯ, ನಕ್ಷತ್ರ), ಅರ್ಕಾವೊತ್ತು (ಸೂರ್ಯ, ನಿರ್ಮಲ) — ಎಲ್ಲವೂ ಸರಿಯಾಗಿ

ಬಳಸುವುದು ಹೇಗೆ

  1. ಸಂಕೇತವನ್ನು ಕಟ್ಟಿ (build) ಸಾಧನಕ್ಕೆ ಹಾಕಿ — ವಿವರಗಳು GitHub ಪುಟದಲ್ಲಿವೆ.
  2. kannada_shaping.kasset ಕಡತವನ್ನು SD ಕಾರ್ಡ್‌ನ ಮೊದಲ ಫೋಲ್ಡರ್‌ಗೆ (root) ನಕಲಿಸಿ.
  3. ಕನ್ನಡ EPUB ಪುಸ್ತಕವನ್ನು ತೆರೆಯಿರಿ.

ಸ್ಥಿತಿ

ಇನ್ನೂ ಪ್ರಯೋಗದ ಹಂತದಲ್ಲಿದೆ. ಈಗ ಅಕ್ಷರಶೈಲಿ ಕಡತವನ್ನು ಪ್ರತಿ ಬಾರಿ ಸಾಧನ ಆರಂಭವಾದಾಗ ಒಂದು ನಿಗದಿತ ಸ್ಥಳದಿಂದ ಓದಲಾಗುತ್ತದೆ; ಅದನ್ನು ಆರಿಸಿಕೊಳ್ಳುವ ಸೆಟ್ಟಿಂಗ್ ಇನ್ನೂ ಬರಬೇಕಿದೆ. ಮೂಲ CrossPoint ನಲ್ಲಿ ಬರುವ ಬದಲಾವಣೆಗಳನ್ನು ಆಗಾಗ ಇದಕ್ಕೂ ಸೇರಿಸಲಾಗುತ್ತದೆ.

ಸಂಕೇತ

github.com/harshkn/crosspoint-reader-kannada